ಚೆಲುವೆ ರಮಣಿ
***********
ಕರದಲೊಂದು ನವಿಲು ಗರಿಯ
ಹಿಡಿದು ನೀನು ಕುಳಿತೆಯಾ
ಯಾರು ನೀನು ಸುಂದರಾoಗಿ
ನಿನ್ನ ಹೆಸರು ಹೇಳೆಯಾ ll

ಮುದ್ದು ಮುಖದ ಚೆಲುವೆ ರಮಣಿ
ಎನ್ನ ಬಳಿಯೆ ನಿಂದೆಯಾ
ಹಸುರು ರವಿಕೆ ತೊಟ್ಟ ನೀನು
ನಗುವ ತೋರಿ ಬಂದೆಯಾ ll

ಚೆಲುವ ಮೊಗದ ಪ್ರೀತಿ ತುಂಬ
ಒಲವ ಧಾರೆ ಸುರಿದೆಯಾ
ಕರದಲಿರುವ ಬಳೆಯ ಸದ್ದು
ಎನ್ನ ಗಮನ ಸೆಳೆದೆಯಾ ll

ಮತ್ತೆ ಮತ್ತೆ ನೋಡ ಬೇಕು
ಎನ್ನುವಷ್ಟು ಚೆಲುವೆಯಾ
ಹುಡುಕಿ ಹೋದ್ರೆ ಸಿಗದು ಇಂತ
ರೂಪವಂತೆ ಬೆಡಗಿಯಾ ll

✍️ ಬಿ. ಉದನೇಶ್ವರ ಪ್ರಸಾದ್ ಮೂಲಡ್ಕ