ಚಂದ್ರಘಂಟಾ ದೇವಿ
**************
ಚಂದಿರ ವದನೆ ವಿಶ್ವನಾಯಕಿ
ಚಂದದಿ ಬಾಳಿಸು ಈ ಜಗದಿ
ವಿಶ್ವಮೋಹಿನಿ ಆದಿ ಶಕ್ತಿಯೆ
ಚಂದ್ರಘoಟಾ ದೇವಿಗೆ ನಮಿಸುವೆ ll

ಜಗವನು ಪೊರೆದು ಭಕ್ತರ ಪಾಲಿಸಿ
ಹರುಷವ ಕೊಡುವ ತಾಯಿಯು
ನವಶಕ್ತಿ ರೂಪದಿ ಕಾಣುವ ದೇವಿಯು
ಪೊಡಮಡುವೆ ಶಿರಬಾಗಿ ಪಾದದಲಿ ll

ತ್ರಿಶೂಲ ಧಾರಿಣಿ ಶ್ರೀಚಕ್ರವಾಸಿನಿ
ಸಿಂಹವಾಹಿನಿ ಸುರಜನ ವಂದಿತೆ
ಮೋಕ್ಷಪ್ರದಾಯಿನಿ ಅಭಯದಾಯಿನಿ
ಸುಂದರ ಶೀಲೆ ಪರಮ ಪಾವನಿ ll

ಅಂಬಿಕೆ ಶ್ರೀ ದುರ್ಗಾoಬಿಕೆ ಶಂಕರಿ
ಮೋದದಿ ಸಲಹುವ ದುರ್ಗಾಪರಮೇಶ್ವರಿ
ನಿನ್ನನು ಬೇಡುವೆ ಎನ್ನಯ ಮನದಲಿ
ಸುಖ ಸಂತೋಷವ ನೀಡುತ ಪೊರೆಯಮ್ಮ ll

✍️ ಬಿ. ಉದನೇಶ್ವರ ಪ್ರಸಾದ್ ಮೂಲಡ್ಕ