ಚಂದದ ಹುಡುಗಿ
***********
ಕಾನನ ನಡುವಲಿ ಹುಲ್ಲಿನ ಮನೆಯಲಿ
ಹುಡುಗಿಯು ನಿಂತಳು ಬಾಗಿಲಲಿ
ಬ್ರಹ್ಮನ ಸೃಷ್ಟಿಯೊ ಏನಿದು ಮಾಯೆಯೊ
ಚಂದವ ಕಾಣುವ ನಾವಿಲ್ಲಿ ll

ಕೊರಳಲಿ ಮಾಲೆಯು ಕೈಯಲಿ ಬಳೆಗಳು
ಅಂದದ ನಗೆಯನು ಬೀರುತಲಿ
ತಲೆಯನು ಬಾಗುತ ನೋಡುವ ನೋಟವು
ಯಾರನೊ ಕಾಯುವ ತವಕದಲಿ ll

ಮೋಹದ ನೋಟವು ಸೆಳೆವುದು ಮನವನು
ಮಾಧುರಿಯಂತಹ ಚೆಲುವಿನಲಿ
ಭಾವದ ಬೆಸುಗೆಯು ಕಣ್ಣಿನ ಕಾಂತಿಯು
ಅವಳನು ನೋಡುವೆ ಒಲವಿನಲಿ ll

ನಯನವು ಸುಂದರ ಮುತ್ತಿನ ನುಡಿಗಳು
ಮೆತ್ತಗೆ ಹೇಳಲು ನೀ ಬಾರೆ
ಸುತ್ತಲು ಕಾನನದಲ್ಲಿಯೆ ಇರುವುದು
ಅಂದದ ಬೆಡಗಿಯೆ ಯಾತಕ್ಕೆ ll

✍️ ಬಿ. ಉದನೇಶ್ವರ ಪ್ರಸಾದ್ ಮೂಲಡ್ಕ