ಗೋಮಾತೆ
********
ಜೀವನ ಸಾಗಿಸೆ ಹಸುವನು ಸಾಕುವ
ರೈತನ ನೋಡುತ ಕಲಿಯೋಣ
ದಿನವಿಡಿ ಹಸುವಿನ ಜೊತೆಯಲಿ ಹುಲ್ಲನು
ತಿನ್ನಿಸಿ ಕಾಲವ ಕಳೆಯೋಣ ll

ಹಸುವನು ಮೇಯಿಸಿ ಮೀಯಿಸಿ ಪೂಜಿಸಿ
ಬದುಕಲಿ ನೆಮ್ಮದಿ ಕಾಣೋಣ
ಹಾಲನು ಕರೆಯುತ ಮಾರುವ ಸಂತೆಗೆ
ಬಂದಿಹ ಹಣದಲಿ ಬಾಳೋಣ ll

ಅಂಬಾ ಎನ್ನುವ ಕರುವಿನ ಕೂಗಿಗೆ
ಗೋವಿನ ಹೃದಯವು ಮಿಡಿಯುತಿದೆ
ತಾಯಿಯ ಪ್ರೀತಿಯು ಏಳೇಳು ಜನ್ಮದ
ಪುಣ್ಯವು ಎಂಬುದ ನುಡಿಯುತಿದೆ ll

✍️ ಬಿ. ಉದನೇಶ್ವರ ಪ್ರಸಾದ್ ಮೂಲಡ್ಕ