ಗಜಚರ್ಮಾoಬರ
*************
ಗಜಚರ್ಮಾoಬರ ಪಾರ್ವತೀಶ
ಮೋದದಿ ಸಲಹು ಜಗದೀಶ
ಪಾಪವ ಕಳೆದು ಪಾವನ ಮಾಡು
ಕರುಣದಿ ಪೊರೆದು ವರವನು ನೀಡು ll

ನಂದಿ ವಾಹನ ಮಂಗಳ ರೂಪನೆ
ನಂಬಿದೆ ನಿನ್ನನು ಅಭಯದಾತನೆ
ಗಂಗೆಯ ಶಿರದಲಿ ಧರಿಸಿದ ದೇವನೆ
ಮಂಗಳ ಕಾರಕ ಶಿವಶಂಕರನೆ ll

ಭಸ್ಮವಿಭೂಷಿತ ಗಿರಿಜಾ ವಲ್ಲಭ
ತ್ರಿಶೂಲ ಧಾರಿಯೆ ತ್ರಿನೇತ್ರನೆ
ಭಕ್ತಿಗೆ ಒಲಿದು ಭಕ್ತರ ಹರಸುವೆ
ಲಿಂಗದ ರೂಪದಿ ದರುಶನ ನೀಡುತ ll

ಭಕ್ತಿಯ ಪೂಜೆಗೆ ಒಲಿಯುವೆ ಎನಗೆ
ಭಕ್ತಿಯ ಸೇವೆಯ ಗೈಯುವೆ ನಿನಗೆ
ಮುಕ್ತಿಯ ದಾರಿಯ ತೋರಿಸು ನೀನು
ನಿತ್ಯದಿ ಭಜಿಸುವೆ ನಿನ್ನನು ನಾನು ll

✍️ ಬಿ. ಉದನೇಶ್ವರ ಪ್ರಸಾದ್ ಮೂಲಡ್ಕ