ಕೊಲ್ಲೂರು ಮೂಕಾಂಬಿಕೆ
****************
ಕೊಲ್ಲೂರು ಪುರನಿಲಯೆ ಮೂಕಾಂಬಿಕೆ
ಕರುಣೆಯಲಿ ಸಲಹೆನ್ನಾ ಜಗದಂಬಿಕೆ
ನಿರತವು ನಿನ್ನಯ ಧ್ಯಾನ ಮಾಡುತಿರುವೆ
ಒಲಿದು ಬಂದು ಹರಸೆನ್ನಾ ಮಾತೆಯೇ ll

ಅಂತರಾಳದಲ್ಲಿ ನೀನೇ ತುಂಬಿರುವೆ
ನಿಂತಲ್ಲಿಯೆ ನಿನ್ನ ರೂಪ ಕಾಣುವೆ
ಮನದಲ್ಲಿ ತುಂಬಿದ ಭಕ್ತಿಯ ಚೆಲುಮೆ
ಅನವರತವು ಕಾಪಾಡು ಅಂಬಿಕೆ ll

ಕೋಲಮುನಿಯ ಭಕ್ತಿಗೆ ಒಲಿದಿಹ ತಾಯೆ
ಕೋಲಾಪುರದಲ್ಲಿಯೆ ನೆಲೆಸಿರುವೆ
ಅಭಯವ ಕರುಣಿಸು ಮoಗಳದಾಯಿನಿ
ವಿದ್ಯಾವಾರಿಧಿಯೆ ಶಕ್ತಿ ಸ್ವರೂಪಿಣಿ ll

✍️ ಬಿ. ಉದನೇಶ್ವರ ಪ್ರಸಾದ್ ಮೂಲಡ್ಕ