ಕುಮಾರನಲ್ಲೂರು ಶ್ರೀದೇವಿ
*******************
ಭಕ್ತರಿಗಿಷ್ಟವ ನೀಡುವ ಶಂಕರಿ
ಕುಮಾರನಲ್ಲೂರು ನಿವಾಸಿನಿ
ವಿದ್ಯೆಯ ಬುದ್ಧಿಯ ಕೊಡುವಳು ಸರಸ್ವತಿ
ನಿಷ್ಠೆಯ ಪೂಜೆಯ ಸ್ವೀಕರಿಸಿ ll

ನಿತ್ಯವೂ ನೆಮ್ಮದಿ ಕರುಣಿಸಿ ಪೊರೆಯೇ
ಭಕ್ತಿಯ ಕರೆಯನು ಕೇಳಿoದು
ಕಂಡೆನು ನಿನ್ನಯ ದಿವ್ಯ ಸ್ವರೂಪವ
ಈ ಶುಭ ಘಳಿಗೆಲಿ ನಾನಿoದು ll

ಭಕ್ತಿಯು ತುಂಬಿದ ಭಕ್ತರ ಸಮೂಹ
ಭವ್ಯದಾ ದೇಗುಲ ನೋಡಲು
ಭಾಗ್ಯವ ಕೊಟ್ಟಳು ಮನಸಿಗೆ ಹಿತವನು
ತಾಯಿಯ ಭಜನೆಯ ಮಾಡಲು ll

ಭಗವತಿ ಸರಸ್ವತಿ ಲಕ್ಷ್ಮಿಯೆ ಪಾರ್ವತಿ
ಕಾಳಿಯೆ ದುರ್ಗೆಯೆ ಅಂಬಿಕೆ
ಹೇಗೇ ಭಜಿಸಲು ನಿನ್ನಯ ನಾಮವ
ಒಲಿದು ಬರುವೆ ಜಗದಂಬಿಕೆ ll

✍️ ಬಿ. ಉದನೇಶ್ವರ ಪ್ರಸಾದ್ ಮೂಲಡ್ಕ