ಒಲವಿನ ಸ್ನೇಹ
**********
ಮುತ್ತನು ಸುರಿಸಲು ಇನಿಯನು ಬಂದನು
ಸುಂದರಿ ನಿನ್ನಯ ಬಳಿಯಲ್ಲಿ
ಸ್ನೇಹದ ನಗೆಯನು ಬೀರುವ ಹುಡುಗಿಯ
ಗಲ್ಲವ ಪಿಡಿದನು ಕರದಲ್ಲಿ ll

ಇನಿಯನ ಕರೆದೆಯ ಕಣ್ಣಿನ ನೋಟದಿ
ದಂತವು ಎಂತಹ ಸುಂದರವು
ಕಿವಿಯಲಿ ಓಲೆಯು ಮುಡಿಯಲಿ ಮಲ್ಲಿಗೆ
ಕೊರಳಲಿ ಮಾಲೆಯು ಚಂದವದು ll

ಪ್ರೇಮದ ರಾಗವು ಹೃದಯವ ಮೀಟಿತು
ಕಂಡೆನು ಸ್ವರ್ಗವ ಭುವಿಯಲ್ಲಿ
ಪ್ರೀತಿಯು ತುಂಬಿದ ನಿನ್ನಯ ಸಲುಗೆಯ
ಅನುಭವವಾಯಿತು ಮೈಯಲ್ಲಿ ll

✍️ ಬಿ. ಉದನೇಶ್ವರ ಪ್ರಸಾದ್ ಮೂಲಡ್ಕ