ಪ್ರೇಮಿಗಳ ದಿನ
ನನ್ನ ಅವನ ಮೊದಲ ಪ್ರೇಮದಿನ
ಇಂದಿಗೂ ನೆನಪಿನ ಚೈತನ್ಯದ ದಿನ
ಉತ್ಸಾಹಭರಿತ ಆನಂದದ ಸುದಿನ
ನಿತ್ಯೋತ್ಸವಾಚರಿಸುವ ದಿನ
ಅವನು ಬದುಕಿನ ಮಾಲಿಕ
ನಾನು ಜೀವನದ ಚಾಲಕ
ಅವನು ಮೂಕ ನಾನು ಭಾವುಕ
ಅವನು ಸಿಂಹ ನಾನು ದೇವಿ
ಅವನು ನಿಧಾನ ನಾನು ಗಡಿಬಿಡಿ
ಅವನು ತತ್ವನಿಷ್ಠ ನಾನು ಪ್ರೇಮನಿಷ್ಠೆ
ಅವನದು ಭಯದ ತಾಂಡವ ನೃತ್ಯ
ನನ್ನದು ಸುಂದರ ಲಾಸ್ಯ ನೃತ್ಯ
ಅವನು ಸೇನೆಯ ಶಿಸ್ತಿನ ಸಿಪಾಹಿ
ನಾನು ಸತತ ಗೊಂದಲಮಯಿ
ಪ್ರೀತಿಪ್ರೇಮದ ಚೆಂದದ ದಿನವಿಂದು
ಪ್ರೇಮ ಆತ್ಮನಿವೇದನೆ ಅರಹುವೆವು
ಪರಿಪಕ್ವ ಜೀವಪರಿಪೂರ್ಣ ಜೀವನ
ಅಪೇಕ್ಷೆಗಳಿಲ್ಲದ ಬಾಳು ಪವಿತ್ರಪಾವನ
ಟಾಮ್ ಯ್ಯಾಂಡಜೆರ್ರಿಯಂತೆಪರಸ್ಪರ
ಕಾಡಿಸುತ ನಗುತಲಿರುವೆವಿಂದು
-
-
ಅನ್ನಪೂರ್ಣ ಸಕ್ರೋಜಿ ಪುಣೆ
-