“ಮತದಾನ ಜಾಗೃತಿ”
ಬಹು ಘೋರ ನರಕ ಯಾತನೆಯ ಶತಮಾನದಿಂದ ಅನುಭವಿಸಿ_
ಬಹುಜನರ ಕನಸುಗಳು ಹೂತು ಹೋದ ಮಣ್ಣಿಂದ ಅಂಕುರಿಸಿ ;
ನಾಡು ಪಡೆಯಿತು ಪರಕೀಯರ ದಾಸ್ಯದಿಂದ ಬಯಸಿದ ಸ್ವಾತಂತ್ರ್ಯ_
ಶ್ರೀ ಸಾಮಾನ್ಯನಿಗೆ ಆಡಳಿತ ಚುಕ್ಕಾಣಿಯ ಅಧಿಕಾರ ನೀಡುವ ಸೌಭಾಗ್ಯ
ಮತದಾನ ಎಂಬುದು ಪ್ರತಿಯೊಬ್ಬ ಪ್ರಜೆಯ ಶ್ರೇಷ್ಠ ಕರ್ತವ್ಯ _
ಅದನ್ನು ಮಾರಿಕೊಂಡು ಕೊರಗಬೇಡಿ ಕೊನೆಗಿಲ್ಲಿ ಓ‌.. ಶ್ರೀಸಾಮಾನ್ಯ ;
ಜಾತಿ _ಧರ್ಮದ ಮೋಹ ಮರೆತು ಯೋಚಿಸಿರಿ ಯೋಗ್ಯ ಅಭ್ಯರ್ಥಿ,
ನಮ್ಮ ತೆರಿಗೆ ನಮ್ಮ ಅಭಿವೃದ್ಧಿಗೆ, ಬೇಕಿಲ್ಲ ಕೊಳ್ಳೆ ಹೊಡೆಯುವ ಸ್ವಾರ್ಥಿ
– ನಾಗರಾಜ ಗುನಗ, ನಿವೃತ್ತ ಸೈನಿಕರು ಕೋಡಕಣಿ, ಕುಮಟಾ ತಾಲ್ಲೂಕು