ಹೆಣ್ಣುಮಕ್ಕಳ ರಕ್ಷಣೆ
ಹೆಣ್ಣು ಹುಣ್ಣಲ್ಲ ಜಗದ ಕಣ್ಣು
ಜಗವನಾಳುವವಳು
ಅಂದಿನ ದ್ರೌಪದಿಗೆ ಐವರು ಪತಿ
ಆದರೂ ಸೋತವರು
ಇಂದಿನ ದ್ರೌಪದಿ ನಮ್ಮ ರಾಷ್ಟ್ರಪತಿ
ಮಹಿಳೆಯರು ಗೆದ್ದರು
ಹೆಣ್ಣು ಮಕ್ಕಳಿಗೀಗ ಬೇಕಿಲ್ಲ ರಕ್ಷಣೆ
ಆತ್ಮನಿರ್ಭರತೆಯವಳು
ಕಿತ್ತೂರು ಚೆನ್ನಮ್ಮ ರಾಣಿ ಲಕ್ಷ್ಮಿಯರ
ಶೂರವೀರ ಹೆಣ್ಣುಮಕ್ಕಳು
ವೀರ ಕಂಕಣ ಕಟ್ಟಿ ಹೋರಾಡಿದ
ವೀರಾಂಗನೆಯರು
ಹಿಮದಲೂ ಸೈ ಸಾಗರದಲೂ ಸೈ
ಹೊಂದಿಕೊಳ್ಳುವವರು
ಆಗಸದಲೂ ಸೈ ಮರಳುಗಾಡಲೂ ಸೈ
ಸೈನ್ಯದಲಿ ಮುನ್ನುಗ್ಗುವರು
ಶತೃಗಳ ರುಂಡ ಚೆಂಡಾಡುವ ಚಂಡಿ
ಚಾಮುಂಡಿಯರು
ಅನಾಚಾರ ಅತ್ಯಾಚಾರ ಸಹಿಸದವರು
ಅವರೆದೆ ಸೀಳುವವರು
ಕ್ಷಮಯಾಧರಿತ್ರಿ ಮೃದುಮನಸಿನವರು
ಭಾರತೀಯ ನಾರಿಯರು
ಜನ ಜಲ ಭಾಷೆಗೆ ತಗಾದೆ ತೆಗೆದರೆ
ಝಾಡಿಸಿ ಓದ್ದೋಡಿಸುವರು
-
-
ಅನ್ನಪೂರ್ಣ ಸುಭಾಷಚಂದ್ರ ಸಕ್ರೋಜಿ, ಪುಣೆ
-