ಬಾಳಿಗೆ ಸಿಂಧೂರ
ನನ್ನ ಈ ಬದುಕಿನ ಸೌಂದರ್ಯ ಜಗತ್ತಿಗೆ ಕ್ಷುಲ್ಲಕವಾಗಿದೆ. ಗಟ್ಟಿತನದ ಮೆಟ್ಟಲುಗಳನ್ನು ಕೊಟ್ಟು, ದಿಟ್ಟತನದ ಹೆಜ್ಜೆಯ ಪಾಠ ಹೇಳಿಕೊಟ್ಟ ಭಾಗ್ಯವಂತನಿಗೆ ಬಾಳ ಕೊಡುವ ನತದೃಷ್ಟೆ ನಾನಾದೆ ಎನ್ನುವ ವೇದನೆಯನ್ನು ನನ್ನ ಮನಸ್ಸಿನ ಭದ್ರ ಕೋಟೆಯೋಳಗೆ ಬಚ್ಚಿಟ್ಟು, ಮೌನದಿಂದ ಸಾಗುವ ನನ್ನ ಬಾಳಿಗೆ ಮತ್ತೆ ಸಿಂಧೂರ ಕೊಡುವ ಪುಣ್ಯಪುರುಷ ಭೇಟಿಯಾಗಬಾರದಿತ್ತೆ,!, ಎನ್ನುವ ಹೊತ್ತಿಗೆ ಹೊರಗಿನಿಂದ ಯಾರದೋ ಸ್ವರ ಕೇಳಿ ಬಂದಂತೆ ಗೋಚರಿಸಿದ ಕಾರಣ, ಬಾಗಿಲು ಬಳಿ ಬಂದು ನೋಡಿದಾಗ ಒಂದು ಕ್ಷಣ ಬ್ರಾಂತಾಳಾದಳು . ನೀವು ಯಾರೆಂದು ನನಗೆ ಪರಿಚಯವಿಲ್ಲ ಎನ್ನುವ ಅವಳ ಸ್ವರದಲ್ಲಿ ಮತ್ತು ಕಣ್ಣಿನಲ್ಲಿ ಪ್ರೀತಿಯನ್ನೂ ತಕ್ಕಡಿಯಲ್ಲಿ ಸರಿ ತೂಗಿದಂತೆ ಗೋಚರಿಸಿತು ಆ ಯುವಕನಲ್ಲಿ. ಬಲಗಾಲಿಟ್ಟು ಒಳಗೆ ಬರಲೇ ಎನ್ನುವ ಹಾಸ್ಯ ನುಡಿಯಲ್ಲಿ ಅವಳ ಗಮನ ಸೆಳೆದನು. ಒಳಗಡೆ ಬಂದು ನಾಲ್ಕು ಗೋಡೆಗಳ ಮಧ್ಯದಲ್ಲಿರುವ ಪರಿಸ್ಥಿತಿ ಮನಗಂಡನು, ಮನೆಗೆ ಬಂದ ಅತಿಥಿಯನ್ನ ಯಥಾ ರೀತಿ ಸತ್ಕರಿಸಿದಳು, ನಂತರ ಆಯುವಕ ನೇರ ನುಡಿಗಳಿಗೆ ತೆರಳಿದ ನಾನೀಗ ನಿಮಗೊಂದು ವಿಶೇಷವಾದ ಶುಭ ಸುದ್ದಿ ಒಂದನೇಳುವ ಸಲುವಾಗಿ ಎಷ್ಟೋ ಕಿ.ಮೀ ಗಳ ದಾಟಿ ನಿಮ್ಮನ್ನ ಹುಡುಕಿ ಬಂದಿರುವೆ ತಿರಸ್ಕರಿಸಿದರೆ ಬಂದ ದಾರಿಗೆ ಸುಂಕವಿಲ್ಲವೆಂದು ವಾಪಾಸ್ ಆಗುವೆ ಆಹ್ವಾನಿಸಿದರೆ ನಿಮಗೊಂದು ಬಾಳು, ನಾನೊಬ್ಬ ಪ್ಲಾಸ್ಟಿಕ್ ಸರ್ಜರಿ ಡಾಕ್ಟರ್ ನಿಮ್ಮ ನೆನಪು ಮಾತ್ರ ಅಚ್ಚಳಿಯದಂತೆ ಮಚ್ಚೆಯಾಗಿ ಉಳಿದ ಕಾರಣ ನಮ್ಮ ಜೀವನದ ಕಳಕಳಿಯ ಬಹುಮಾನಗಳು ಎನ್ನುವ ಸಂದೇಶ ಸಾರುತ ನವ ಜೋಡಿಗಳಾಗಿ ಸುಖ ದಾಂಪತ್ಯದ ಬದುಕಿಗೆ ನಾಂದಿಯಾದರು ಅದ್ಭುತ ಜೋಡಿಗಳಾಗಿ…….

✍️ ಚನ್ನವೀರ ಸ್ವಾಮಿ ಹಿರೇಮಠ್ ಹೊಳಗುಂದಿ | ಮನಸಿನ ಭಾವನೆಗಳ ಆರಾಧಕ