ಅಸಾಧ್ಯ ಅನ್ನೋ ಪದದಲ್ಲಿನೇ ಸಾಧ್ಯ ಅನ್ನೋದು ಇರಬೇಕಾದ್ರೆ, ಸಾಧಿಸಬೇಕು ಎನ್ನುವ ಛಲ ಮಾತ್ರ ನಮ್ಮಲ್ಲಿ ಯಾಕಿರಬಾರದು? ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಡಿಗ್ರಿಯಲ್ಲಿ ಫೇಲಾದ ಎಷ್ಟೋ ಜನ ಐ.ಎ.ಎಸ್/ಕೆ.ಎ.ಎಸ್ ಪಾಸ್ ಆಗಿರೋ ಉದಾಹರಣೆಗಳು ಸಾಕಷ್ಟಿವೆ. ಯಾರಿಂದ ಏನನ್ನು ಮಾಡಲು ಆಗುವುದಿಲ್ಲವೋ ಅವರು ಮಾತ್ರ ಕೇವಲ ಕಾರಣಗಳ ಪಟ್ಟಿ ಮಾಡ್ತಾರೆ, ಆದ್ರೆ ಯಾರು ನಿಜವಾಗಲೂ ಏನಾದರೂ ಸಾಧನೆ ಮಾಡ್ಬೇಕು ಅನ್ಕೋತಾರೋ ಅವರು ಮಾತ್ರ ತಮ್ಮ ಗೆಲುವಿಗೆ ಸೂತ್ರಗಳ ಮೆಟ್ಟಿಲು ಮಾಡಿಕೊಳ್ಳುತ್ತಾರೆ. “ಕುಳಿತು ತುಕ್ಕಿಡಿಯುವ ಬದಲು ನಡೆದು ಸವೇಯುವುದು ಮೇಲು” ಎನ್ನುವಂತೆ ಯಾರು ತಮ್ಮನ್ನು ತಾವು ನಂಬಿರುತ್ತಾರೋ ಅಂತವರಿಗೆ ಸೋಲಿನ ಸಿಡಿಲೇ ಬಡಿದರೂ ಬಗ್ಗದೆ ಅವರು ಮುಂದೆ ಸಾಗಿ ಒಂದು ದಿನ ಗೆಲುವಿನ ಉಡುಗೊರೆಯ ಹಾರವನ್ನೇ ಕೊರಳಿಗೆ ಹಾಕಿಸಿಕೊಳ್ಳುತ್ತಾರೆ. ಗೆಲುವಿನ ಹಾದಿಯಲ್ಲಿ ಕಲ್ಲು – ಮುಳ್ಳುಗಳು ಇರುವುದು ಸಹಜ, ಕಾಲಿಗೆ ಮುಳ್ಳು ಚುಚ್ಚಿದರೆ ಮುಳ್ಳನ್ನು ಕಿತ್ತೆಸೆಯಬೇಕೆ ವಿನಃ, ಕಾಲನ್ನೇ ಕತ್ತರಿಸಬಾರದು. ಹಾಗೆಯೇ ನಮ್ಮ ಜೀವನದ ಹೋರಾಟದಲ್ಲಿ ಎಷ್ಟೆಲ್ಲ ಕಷ್ಟ-ಕಾರ್ಪಣ್ಯಗಳು ಕಾಡಿದರೂ ಅಂಜದೆ ಅವುಗಳನ್ನು ನಮ್ಮ ತಲೆಯಿಂದ ಕಿತ್ತೊಗೆದು ಕೇವಲ ನಮ್ಮ ಗುರಿಯೆಡೆಗೆ ಮಾತ್ರ ಹವಣಿಸುತ್ತಿರಬೇಕು.
ನಿನಗಿದು ಸಾಧ್ಯ
Related Posts
ಕನ್ನಡದ ಬೆಳವಣಿಗೆಗೆ ನಾವೇನು ಮಾಡಬಹುದು?
ಕನ್ನಡದ ಬೆಳವಣಿಗೆಗೆ ನಾವೇನು ಮಾಡಬಹುದು? – ವಿಶ್ವಾಸ್ ಡಿ .ಗೌಡ, ಸಕಲೇಶಪುರ ಕನ್ನಡದ ಬೆಳವಣಿಗೆಗೆ ನಾವೇನು ಮಾಡಬಹುದೆಂದು ನನ್ನನ್ನು ಆಗಿಂದಾಗ ಉತ್ಸಾಹಿ ಯುವಕ ಯುವತಿಯರು ಕೇಳುತ್ತಿರುತ್ತಾರೆ. ಅವರಿಗೆ ತೋರ್ಗಂಬವಾಗಿ ಕೆಲವು ಸಲಹೆಗಳನ್ನು ಇಲ್ಲಿ ಕೊಟ್ಟಿದ್ದೇನೆ. ಇವುಗಳನ್ನು ಅಳವಡಿಸಿಕೊಳ್ಳಿ ಎಂದು ನನ್ನ ವಿನಂತಿ.…
Read moreತಪ್ಪುಗಳಿಗೆ ಪಶ್ಚಾತಾಪವೇ ಪರಿವರ್ತನೆಯ ಮಾರ್ಗ
ತಪ್ಪುಗಳಿಗೆ ಪಶ್ಚಾತಾಪವೇ ಪರಿವರ್ತನೆಯ ಮಾರ್ಗ “””‘”””””’””””” ಯಾರೇ ವ್ಯಕ್ತಿಯಾಗಲಿ ಅವನ ವಿವೇಕ ಸಜ್ಜನಿಕೆ ಸೇವಾಭಾವದಂತ ವ್ಯಕ್ತಿತ್ವದಿಂದಲೇ ಸಾಮಾಜಿಕವಾಗಿ ರಾಜಕೀಯವಾಗಿ, ಕೌಟುಂಬಿಕವಾಗಿ ಜನಮನದಲ್ಲಿ ಗೌರವಕ್ಕೂ ಅರ್ಹನಾಗುತ್ತಾನೆ.“ತಪ್ಪು ಮಾಡದ ಮನುಷ್ಯನಿಲ್ಲ ತಿದ್ದಿ ಬುದ್ದಿ ಹೇಳದ ಗುರುವಿಲ್ಲ” ನಡೆಯುವಾಗ ಎಡಹುವುದು ಸಹಜ. ಮತ್ತೆ ಸಾವರಿಸಿಕೊಂಡು ಸರಿಯಾದ…
Read more