ಅನ್ನವೇ ದೇವರು, ಅನ್ನವೇ ಪರಬ್ರಹ್ಮ. 84 ಕೋಟಿ ಜೀವರಾಶಿಗಳಿಗೂ ಆಹಾರಬೇಕು. ಆಹಾರವಿಲ್ಲದೆ ಬದುಕಲು ಸಾಧ್ಯವಿಲ್ಲ. ಭೂಮಿಯ ಮೇಲೆ ವಾಸ ಮಾಡುವ ಪ್ರತಿಯೊಂದು ಜೀವರಾಶಿಗೂ ಅನ್ನ ಬೇಕೇ ಬೇಕು. ರೈತರು ಬೆವರು ಸುರಿಸಿ ದುಡಿದಾಗ ಮಾತ್ರ ಆಹಾರ ಧಾನ್ಯ ಬೆಳೆಯಬಹುದು ಮತ್ತು ಅದರಿಂದ ಹಸಿವನ್ನು ಹಿಂಗಿಸಿಕೊಳ್ಳಬಹುದು. ಹಸಿದವರಿಗೆ ಮಾತ್ರ ಗೊತ್ತು ಅನ್ನದ ಬೆಲೆ. ಕೂಡಿಟ್ಟ ಕೋಟಿ ಕೋಟಿ ಹಣವನ್ನು ಕೋಟೆ ಕಟ್ಟಿ ಇಡಲು ನೂರೆಂಟು ಯೋಚನೆಗಳನ್ನು ಯೋಜನೆಗಳನ್ನು ಮಾಡಿ ಎಲ್ಲಿ ಸಿಕ್ಕಿಹಾಕಿಕೊಳ್ಳುತ್ತೇವೋ ಎಂದು ಭಯಬೀತರಾಗಿ ಚಿಂತೆಯ ಬದುಕನ್ನು ತಬ್ಬಿಕೊಳ್ಳುತ್ತಾರೆ. ಎಷ್ಟೇ ಕೂಡಿಟ್ಟರು ಹಸಿವೆಗೆ ಅನ್ನ ತಿನ್ನಬಹುದೇ ಹೂರತು ದುಡ್ಡು; ಚಿನ್ನ ತಿನ್ನಲು ಬರುವುದಿಲ್ಲ. ಅಟ್ಟಿ ತಿನ್ನದ ಜೀವ ಸಂಕುಲವೇ ಇಲ್ಲವೆನ್ನುವುದಕ್ಕೆ ಚೀನಾ ದೇಶದ ಜನರ ಹಸಿವೆ ಸಾಕ್ಷಿ! ಮಾನಸಿಕವಾಗಿ ಹಸಿದವನಿಗೆ ಏನು ತಿಂದರೂ ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆ.
ಹಸಿವು ನೀಗಲು ಅನ್ನ ದೇವರ ಮುಂದೆ ಅನ್ಯ ದೇವರಿಲ್ಲ.
Related Posts
ಪಿತ್ತರಸ
ಪಿತ್ತರಸ ಪಿತ್ತ ಎಂದರೇನು? ಪಿತ್ತ ಉಲ್ಬಣಗೊಂಡರೆ ಯಾವ ರೀತಿಯ ರೋಗಗಳು ಉಂಟಾಗುತ್ತವೆ ಮತ್ತು ಈ ಕಾಯಿಲೆಗೆ ಪರಿಹಾರಗಳು ಯಾವುವು? ಎಂಬುದನ್ನು ನಿಖರವಾಗಿ ಅರ್ಥಮಾಡಿಕೊಳ್ಳೋಣ. ಪಿತ್ತರಸ ಹೇಗಿರುತ್ತದೆ:- ಪಿತ್ತವನ್ನು ತಪ್ತಿ ಇತಿ ಪಿತ್ತಂ ಎಂದು ವಿವರಿಸಲಾಗಿದೆ. ಪಿತ್ತದ ಕಾರ್ಯವು ದೇಹದ ಕಾರ್ಯವನ್ನು ನಿಯಂತ್ರಿಸುವುದು…
Read moreಪುಟ್ಟ ಮಗುವಿನ ದಿಟ್ಟ ಕನಸು
ಪುಟ್ಟ ಮಗುವಿನ ದಿಟ್ಟ ಕನಸು ಒಂದು ಪುಟ್ಟ ಹಳ್ಳಿ. ಆ ಪುಟ್ಟ ಹಳ್ಳಿಯಲ್ಲಿ ಒಂದು ಸಣ್ಣ ಕುಂಟುಬ. ಈ ಕುಟುಂಬದಲ್ಲಿ ಇಬ್ಬರು ಸತಿಪತಿಗಳು. ಇವರಿಗೆ ಅನೇಕ ವರ್ಷಗಳವರೆಗೆ ಮಕ್ಕಳು ಇರಲಿಲ್ಲಾ. ಅದರ ಸಲುವಾಗಿ ಇವರ ಮನಸ್ಸಿನಲ್ಲಿ ಚಿಂತೆ ಮನೆ ಮಾಡಿತ್ತು. ಅದು…
Read more