ಅಸಾಧ್ಯ ಅನ್ನೋ ಪದದಲ್ಲಿನೇ ಸಾಧ್ಯ ಅನ್ನೋದು ಇರಬೇಕಾದ್ರೆ, ಸಾಧಿಸಬೇಕು ಎನ್ನುವ ಛಲ ಮಾತ್ರ ನಮ್ಮಲ್ಲಿ ಯಾಕಿರಬಾರದು? ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಡಿಗ್ರಿಯಲ್ಲಿ ಫೇಲಾದ ಎಷ್ಟೋ ಜನ ಐ.ಎ.ಎಸ್/ಕೆ.ಎ.ಎಸ್ ಪಾಸ್ ಆಗಿರೋ ಉದಾಹರಣೆಗಳು ಸಾಕಷ್ಟಿವೆ. ಯಾರಿಂದ ಏನನ್ನು ಮಾಡಲು ಆಗುವುದಿಲ್ಲವೋ ಅವರು ಮಾತ್ರ ಕೇವಲ ಕಾರಣಗಳ ಪಟ್ಟಿ ಮಾಡ್ತಾರೆ, ಆದ್ರೆ ಯಾರು ನಿಜವಾಗಲೂ ಏನಾದರೂ ಸಾಧನೆ ಮಾಡ್ಬೇಕು ಅನ್ಕೋತಾರೋ ಅವರು ಮಾತ್ರ ತಮ್ಮ ಗೆಲುವಿಗೆ ಸೂತ್ರಗಳ ಮೆಟ್ಟಿಲು ಮಾಡಿಕೊಳ್ಳುತ್ತಾರೆ. “ಕುಳಿತು ತುಕ್ಕಿಡಿಯುವ ಬದಲು ನಡೆದು ಸವೇಯುವುದು ಮೇಲು” ಎನ್ನುವಂತೆ ಯಾರು ತಮ್ಮನ್ನು ತಾವು ನಂಬಿರುತ್ತಾರೋ ಅಂತವರಿಗೆ ಸೋಲಿನ ಸಿಡಿಲೇ ಬಡಿದರೂ ಬಗ್ಗದೆ ಅವರು ಮುಂದೆ ಸಾಗಿ ಒಂದು ದಿನ ಗೆಲುವಿನ ಉಡುಗೊರೆಯ ಹಾರವನ್ನೇ ಕೊರಳಿಗೆ ಹಾಕಿಸಿಕೊಳ್ಳುತ್ತಾರೆ. ಗೆಲುವಿನ ಹಾದಿಯಲ್ಲಿ ಕಲ್ಲು – ಮುಳ್ಳುಗಳು ಇರುವುದು ಸಹಜ, ಕಾಲಿಗೆ ಮುಳ್ಳು ಚುಚ್ಚಿದರೆ ಮುಳ್ಳನ್ನು ಕಿತ್ತೆಸೆಯಬೇಕೆ ವಿನಃ, ಕಾಲನ್ನೇ ಕತ್ತರಿಸಬಾರದು. ಹಾಗೆಯೇ ನಮ್ಮ ಜೀವನದ ಹೋರಾಟದಲ್ಲಿ ಎಷ್ಟೆಲ್ಲ ಕಷ್ಟ-ಕಾರ್ಪಣ್ಯಗಳು ಕಾಡಿದರೂ ಅಂಜದೆ ಅವುಗಳನ್ನು ನಮ್ಮ ತಲೆಯಿಂದ ಕಿತ್ತೊಗೆದು ಕೇವಲ ನಮ್ಮ ಗುರಿಯೆಡೆಗೆ ಮಾತ್ರ ಹವಣಿಸುತ್ತಿರಬೇಕು.
ನಿನಗಿದು ಸಾಧ್ಯ
Related Posts
ಜೀವನೋಪಾಯದ ವೃತ್ತಿ ಕೌಶಲ್ಯ ಕಲಿಸಿದಾತರೆಲ್ಲರು ಶಿಕ್ಷಕರಲ್ವೆ!
…ಶಿಕ್ಷಕರ ದಿನಾಚರಣೆ. … … … … . ಜೀವನೋಪಾಯದ ವೃತ್ತಿ ಕೌಶಲ್ಯ ಕಲಿಸಿದಾತರೆಲ್ಲರು ಶಿಕ್ಷಕರಲ್ವೆ! *********(((((($$$$$))))))***** ಜೀವನಾಧಾರಕ್ಕಾಗಿ ಶಿಕ್ಷಣವೆ ಮೂಲ ಜೀವನೋಪಾಯಕ್ಬೇಕು ವೃತ್ತಿಕೌಶಲ್ಯ ಜ್ಞಾನವಿಕ್ಕಿ ದುಡಿದು ಹಣಗಳಿಸೋದ ಜೀವಿಸುತ ತನ್ನಾಶ್ರಿತರ ಸಲಹೊ ಸಾರ್ಥಕ ಜೀವನದ ಜಾಣ ಕಲೆ ಕಲಿಸಿದಾತ ತಾ…
Read moreಪುಟ್ಟ ಮಗುವಿನ ದಿಟ್ಟ ಕನಸು
ಪುಟ್ಟ ಮಗುವಿನ ದಿಟ್ಟ ಕನಸು ಒಂದು ಪುಟ್ಟ ಹಳ್ಳಿ. ಆ ಪುಟ್ಟ ಹಳ್ಳಿಯಲ್ಲಿ ಒಂದು ಸಣ್ಣ ಕುಂಟುಬ. ಈ ಕುಟುಂಬದಲ್ಲಿ ಇಬ್ಬರು ಸತಿಪತಿಗಳು. ಇವರಿಗೆ ಅನೇಕ ವರ್ಷಗಳವರೆಗೆ ಮಕ್ಕಳು ಇರಲಿಲ್ಲಾ. ಅದರ ಸಲುವಾಗಿ ಇವರ ಮನಸ್ಸಿನಲ್ಲಿ ಚಿಂತೆ ಮನೆ ಮಾಡಿತ್ತು. ಅದು…
Read more