Table of Contents

ನನ್ನ ಪ್ರೀತಿಯ ಶಿಕ್ಷಕ ಬಂಧುಗಳೇ… ಈ ಮೂಲಕ ತಮಗೆಲ್ಲ ತಿಳಿಯಪಡಿಸುವುದೇನೆಂದರೆ – ನಾವು ಅಲಂಕರಿಸಿರುವ ಶಿಕ್ಷಕ ವೃತ್ತಿಯು ವಿಶ್ವದಲ್ಲಿಯೇ ಬಹಳಷ್ಟು ಪಾವಿತ್ರ್ಯತೆಯನ್ನುಳ್ಳದ್ದಾಗಿದ್ದು, ಅದನ್ನು ಕಾಪಾಡಿಕೊಂಡು ಬೆಳೆಸುತ್ತ ಸಾಗುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ನಾವುಗಳು ಇಂದು ಮುದ್ದು ವಿದ್ಯಾರ್ಥಿಗಳಿಗೆ ಮಾನವೀಯತೆಯಿಂದ ಅಕ್ಷರಜ್ಞಾನ, ಯೋಗ್ಯ ನಡೆ-ನುಡಿ, ಸದ್ಭಾವ ಹಾಗೂ ವಿಶ್ವಭ್ರಾತೃತ್ವವನ್ನೊಳಗೊಂಡಿರುವ ಬದುಕುವ ಕಲೆಯನ್ನು ಬೋಧಿಸಿದರೆ ಸಾಲದು. ಆ ಬೋಧನೆಗೆ ತಕ್ಕಂತೆ ನಮ್ಮ ನಡೆ-ನುಡಿಯು ಇರಬೇಕಾದದ್ದು ಅತ್ಯವಶ್ಯಕ.

        ಬಿಳಿ ಹಾಳೆಯಂತಿರುವ ಈ ಸಮಾಜವನ್ನು ಸುಂದರ ಹೂ-ದೋಟವನ್ನಾಗಿ ನಿರ್ಮಿಸುವ ನಾವುಗಳು ಸೌಜನ್ಯತೆ; ಸಮಾನ-ಸದ್ಭಾವ ಹೊಂದಿರಲೇಬೇಕು. ಏಕೆಂದರೆ ನಾವೆಲ್ಲರೂ ಇಡೀ ಜಗತ್ತಿನ ಮಾಲೀಕರಿದ್ದಂತೆ, ನಾವಿದ್ದಂತೆಯೇ ನಮ್ಮ ಮುಂಬರುವ ಸಮಾಜ; ದೇಶ; ವಿಶ್ವ ಇರುವುದು. ಆದ್ದರಿಂದ ನಾವೆಲ್ಲರೂ ಇಂದು ಈ ಪವಿತ್ರ ವೃತ್ತಿಯ ಪಾವಿತ್ರ್ಯತೆಯನ್ನು ಕಾಪಾಡಿಕೊಂಡು ಉಳಿಸಿ-ಬೆಳೆಸುವಗೋಸ್ಕರ ನಮ್ಮಲ್ಲಿ-ನಾವು ಸನ್ನಡತೆ; ಏಕತೆ; ಸಮಾನತೆ; ಮಾನವೀಯತೆ; ಸಮಯ ಪ್ರಜ್ಞೆ ಮುಂತಾದ ಅತ್ಯಮೂಲ್ಯ ಅಂಶಗಳನ್ನು ಅಳವಡಿಸಿಕೊಂಡು ನಮ್ಮ ಮುಂಬರುವ ಸಮಾಜಕ್ಕೆ ನಾವೆಲ್ಲರೂ ಇಂದು ದಾರಿ ದೀಪವಾಗೋಣ.

          – ಲಾಲಸಾಬ ಹುಸ್ಮಾನ ಪೆಂಡಾರಿ
            ಅಧ್ಯಕ್ಷರು: ಕಸ್ತೂರಿ ಸಿರಿಗನ್ನಡ ವೇದಿಕೆ