ರಂಜಿಸು ರಶ್ಮಿ
ಮುಂಜಾವಿನ ಮಂಜು ಮಾಸುವ ಮುನ್ನ
ನೆನೆಯುತ್ತ ನಿಂತಿರುವೇ ನಾ ನಲ್ಲ-ನನ್ನ ||ಪಲ್ಲವಿ||
ಮುಂದೆ ಮಳೆಗಾಲ ಮುಗಿದರು ಮಾಯವಾಗಲ್ಲ
ಮರೆಯುವ ಮುನ್ನ ಮರೆತು ಮರೆಯಾಗಬೇಡ
ಸುಂದರ ಸೂರ್ಯೋದಯ ಸಿರಿ-ಸಂಪಿಗೆಯ
ಓ… ಚೇಲುವೆಯಾ ಚೆಲುವಾ ಚೆಲ್ಲಾಟವಾಡಬೇಡ
ರಂಗು-ರಂಗಿನ ರಶ್ಮಿಗಳಿಂದ ರಂಜಿಸು ರನ್ನಾ
ಅಂದು ಅಂಗೈಯಲ್ಲಿಯೇ ಆವರಿಸುವೆ ಅವುಗಳನ್ನ
ಹೂವಿನ ಹೊರೆ ಹೊರೆಯಾಗುವುದೆಂದು ಹೇಳಬೇಡ
ದೂರದ ಡುಂಡನೆಯ ದುಂಬಿಯೇ ದುರಾಗಬೇಡ
ಕತ್ತಲೆ ಕವಿದರು ಕಾಯುತ್ತ ಕುಳಿತಿರುವೆ
ಬೆಳದಿಂಗಳ ಬಾಳಲ್ಲಿ ಬೆಳಕಾಗಿ ಭಾ
ಆತುರದಿ ಅಂಜದೇ ಅಂಚು-ಅಂಚಿನಲಿ ಅವಿತುಕೊ
ಆನಂದ ಅನುಭವಿಸಲು ಆಕಾಶವನ್ನೇ ಆವರಿಸಿಕೋ
-✍️ ಕವಿತ್ತ ಕರ್ಮಮಣಿ