ಕಾಡಿನ ಸವಿ
ಹಚ್ಚ ಹಸಿರಿನ ಕಾಡು
ಮುಗಿಲ ಎತ್ತರ ನೋಡು
ಪ್ರಕೃತಿಯ ಮಡಿಲಲ್ಲಿ ಇಂಪಾದ ಹಾಡು
ಬಗೆ ಬಗೆ ಹಕ್ಕಿಗಳ ಚಿತ್ತಾರವ ನೋಡು
ಖಗ ಮೃಗ ಪ್ರಾಣಿಗಳ ಹಿಂಡನ್ನು ನೋಡು
ಮೈತುಂಬಿಸುವ ಜಲ ತಾರೆಗಳ ನೋಡು
ಕಳ್ಳಿನ ಸಾಲಿನಲ್ಲಿ ಜೇನಿನ ಗೂಡು
ಬಗೆ ಬಗೆಯ ಮರಗಳು
ನಾನಾ ರೀತಿಯ ಹಣ್ಣುಗಳು
ಮರದ ರಂಬೆಯ ಮೇಲೆ ಗೂಡುಗಳು
ಪ್ರಕೃತಿ ನಮಗೆ ಕಲಿಸುವ ಪಾಠಗಳು
ಜನರ ಜೀವನ ಪಾಡು
ಗೆಡ್ಡೆ ಗೆಣಸಿನ ಜಾಡು
ಪ್ರಕೃತಿಯ ಮಡಿಲಲ್ಲಿ ಪಂಜಿನ ಹಾಡು
ನಾನಾ ರೀತಿಯ ವೇಷವ ನೋಡು
- ✍️ ಚಂದ್ರಶೇಖರಚಾರಿ ಎಂ.
- ಕನ್ನಡ ಶಿಕ್ಷಕರು: ವಿಶ್ವಮಾನ ವ ವಸತಿ ಶಾಲೆ
- ಸೀಬಾರ ಗುತ್ತಿ ನಾಡು, ಚಿತ್ರದುರ್ಗ