ಓ ನನ್ನ ವಿದ್ಯಾರ್ಥಿಗಳೇ…!

ಬಂಧಿಯಾಗದಿರಿ ಶಾಲೆಯ ಪಠ್ಯ ಪುಸ್ತಕಗಳಲ್ಲಿ,
ಭ್ರಮಿಸಿ ಆಸ್ವಾದಿಸಿರಿ ಸತ್ಯವನ್ನು ಪರಿಸರದ ಮಡಿಲಿನಲ್ಲಿ
ಅರ್ಹತೆ ಪಡೆಯಲು ಇರಲಿ ಪದವಿ-ಪದಕಗಳ ಸಾಲು,
ಅಜ್ಞಾನ ಅಳಿಸಿ ಬೆಳಗಿಸುವಲ್ಲಿ ದೀಪ ಹಚ್ಚಿರಲಿ ನಿಮ್ಮ ಪಾಲು

ಕುಗ್ಗದಿರಿ ಕಂಡು ಜೊತೆಗೋಡುವ ಜಗದ ಹಿರಿಮೆ,
ಒಗ್ಗರಣೆಗೆ ಕಾಯುತ್ತಿರಿ ಸವಿರುಚಿ ನೀಡಲು ಬೇಕಿದೆ ತುಸು ತಾಳ್ಮೆ
ನಿರ್ಣಯಿಸುವ ಮುನ್ನ ಆತುರದ ನಿರ್ಧಾರ ಸಾಧನೆ ಕಡೆಗಿರಲಿ ಗಮನ,
ಜೀವನ ಚಿಕ್ಕದು ಜಗವಿದೆ ವಿಶಾಲ, ವಿದಾಯದಲ್ಲಿರಲಿ ಜಗದ ನಮನ

✍️ ನಾಗರಾಜ ಗುನಗ
ನಿವೃತ್ತ ಸೈನಿಕರು, ಕೋಡಕಣಿ, ಕುಮಟಾ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ